Feedback / Suggestions

Application for National Kannada Research Symposium

ರಾಷ್ಟ್ರೀಯ ಕನ್ನಡ ಸಂಶೋಧನಾ ಕಮ್ಮಟ

  ಅರ್ಜಿ ನಮೂನೆ

ನಿಬಂಧನೆಗಳು:

 ವಯಸ್ಸಿನ ನಿರ್ಬಂಧ ಇರುವುದಿಲ್ಲ. 

  • ಈಗಾಗಲೇ ಸಂಶೋಧನಾ ಲೇಖನಗಳನ್ನು ಬರೆದಿರುವವರು ಹಾಗೂ ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದು. 
  • ಆಯ್ಕೆಯಾದ ಅಭ್ಯರ್ಥಿಗಳು ಕಡ್ಡಾಯವಾಗಿ ಐದು ದಿನಗಳು ಶಿಬಿರದಲ್ಲೇ ವಾಸ್ತವ್ಯ ಮಾಡಬೇಕು. ಅಗತ್ಯವಿರುವ ಉಡುಪುಗಳು, ಹಾಸಲು ಮತ್ತು ಹೊದಿಕೆಗಳನ್ನು ತರುವುದು. 
  • ಅರ್ಜಿಯನ್ನೊಳಗೊಂಡ ಲಕೋಟೆಯ ಮೇಲ್ಭಾಗದಲ್ಲಿ ಕಡ್ಡಾಯವಾಗಿ “ರಾಷ್ಟ್ರೀಯ ಕನ್ನಡ ಸಂಶೋಧನಾ ಕಮ್ಮಟ” ಶಿಬಿರಕ್ಕೆ ಅರ್ಜಿಎಂದು ನಮೂದಿಸಿರಬೇಕು. 
  • ಆಯ್ಕೆಯಾದ ಅಭ್ಯರ್ಥಿಗಳಿಗೆ ಶಿಬಿರದ ಸ್ಥಳಕ್ಕೆ ಬಂದು ಹೋಗಲು ರಾಜಹಂಸ ಬಸ್ ದರ / ಸಾಮಾನ್ಯ ರೈಲ್ವೆ ದರವನ್ನು ನೀಡಲಾಗುವುದು. ಹಾಗೂ ಐದು ದಿನಗಳು ಉಟೋಪಹಾರ / ವಸತಿ ವ್ಯವಸ್ಥೆಯನ್ನು ಮಾಡಲಾಗುವುದು. 
  • ಅಕಾಡೆಮಿ ನಿಯಮಾನುಸಾರ ಆಯ್ಕೆಯಾಗಿ ಭಾಗವಹಿಸಿದ ಅಭ್ಯರ್ಥಿಗಳಿಗೆ ಪ್ರೋತ್ಸಾಹಧನ ಮತ್ತು ಪ್ರಯಾಣಭತ್ಯೆಯನ್ನು ಕಾರ್ಯಕ್ರಮ ಮುಗಿದ ನಂತರ ಬ್ಯಾಂಕ್ ಖಾತೆಗೆ ನೇರವಾಗಿ ಆರ್.ಟಿ.ಜಿ.ಎಸ್ ಮೂಲಕ ಪಾವತಿಸಲಾಗುವುದು. 
  • ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಅಕಾಡೆಮಿಯ ವೆಬ್‍ಸೈಟ್ ನಿಂದ ಪಡೆದುಕೊಳ್ಳಬಹುದು. 
  • ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನುಕರ್ನಾಟಕ ಸಾಹಿತ್ಯ ಅಕಾಡೆಮಿಯ ವೆಬ್‍ಸೈಟ್ http://sahithyaacademy.gov.in
    ನಲ್ಲಿ ಪ್ರಕಟಿಸಲಾಗುವುದು. 
  • ಅಭ್ಯರ್ಥಿಗಳ ಆಯ್ಕೆಯಲ್ಲಿ ಅಕಾಡೆಮಿಯ ತೀರ್ಮಾನವೇ ಅಂತಿಮ. 
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:22-02-2022 
  • ಕಡ್ಡಾಯವಾಗಿ ಅರ್ಜಿಯಲ್ಲಿ ಪೂರ್ಣ ವಿಳಾಸ, ಎಸ್.ಎಸ್.ಎಲ್.ಸಿ. ಅಂಕಪಟ್ಟಿ, ಆಧಾರ್‍ಕಾರ್ಡ್ ಹಾಗೂ ವಾಟ್ಸಾಪ್ ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ ನಮೂದಿಸಬೇಕು. ಇಲ್ಲದಿದ್ದರೆ ಅರ್ಜಿಯನ್ನು ತಿರಸ್ಕರಿಸಲಾಗುವುದು. 
  • ಅರ್ಜಿಯಲ್ಲಿಕೋರಿರುವ ದಾಖಲೆಗಳನ್ನು ಲಗತ್ತಿಸದಿದ್ದಲ್ಲಿಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು. 
  • ಅರ್ಜಿಯನ್ನು ಈ ಕೆಳಕಂಡ ವಿಳಾಸಕ್ಕೆ ಖುದ್ದಾಗಿ / ರಿಜಿಸ್ಟ್ರರ್ ಅಂಚೆ / ಕೊರಿಯರ್ ಮೂಲಕವೇ ಕಳುಹಿಸಬೇಕು.ಇ-ಮೇಲ್ ಮೂಲಕ ಕಳುಹಿಸಿದ ಅರ್ಜಿಗಳನ್ನು ಪರಿಗಣಿಸುವುದಿಲ್ಲ.

 

ಅರ್ಜಿಗಳನ್ನು ಕಳುಹಿಸಬೇಕಾದ ವಿಳಾಸ

ರಿಜಿಸ್ಟ್ರಾರ್ 

ಕರ್ನಾಟಕ ಸಾಹಿತ್ಯಅಕಾಡೆಮಿ, 

ಎರಡನೇ ಮಹಡಿ, ಕನ್ನಡ ಭವನ, 

ಜೆ.ಸಿ.ರಸ್ತೆ, ಬೆಂಗಳೂರು-560 002. 

ದೂ: 080-22211730 / 22106460/ 29601730

ಅರ್ಜಿಸಲ್ಲಿಸಲು ನಿಯಮಗಳು 

  1. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ವಿಮರ್ಶೆ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಸಂಶೋಧನೆ ನಡೆಸುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 
  1. ಈಗಾಗಲೇ ಕನ್ನಡದ ನಿಯತಕಾಲಿಕೆಗಳು/ ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದ ಸಂಶೋಧಕರಿಗೆ ಆದ್ಯತೆ ನೀಡಲಾಗುವುದು. 
  1. ಈಗಾಗಲೇ ನಿಯತಕಾಲಿಕೆಗಳು/ ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿರುವ ಸಂಶೋಧಕರು ಕನಿಷ್ಠ ಒಂದು ಲೇಖನವನ್ನಾದರೂ ಅರ್ಜಿಯೊಂದಿಗೆ ಸಲ್ಲಿಸಬೇಕು. 
  1. ಕಮ್ಮಟದಲ್ಲಿ ಭಾಗವಹಿಸುವ ಸಂಶೋಧನಾರ್ಥಿಗಳು ಈ ಮೇಲ್ಕಂಡ ಪರಿವಿಡಿಯ ಆಧಾರದ ಮೇಲೆ ಐದು ಪುಟಗಳ ಮಿತಿಯಲ್ಲಿ ಒಂದು ಸಂಶೋಧನಾ ಪ್ರಬಂಧವನ್ನು ಬರೆದು ಅರ್ಜಿಯೊಂದಿಗೆ ಕಳುಹಿಸಿಕೊಡಬೇಕು. ಅದರ ಸಾಫ್ಟ್ ಕಾಪಿಯನ್ನು sahithyaacademy.prakatane@gmail.com ಗೆ ಕಳುಹಿಸಬೇಕು. 
  1. ನಿಯತಕಾಲಿಕೆಗಳಲ್ಲಿ/ ಪತ್ರಿಕೆಗಳಲ್ಲಿ ಪ್ರಕಟವಾದ ಸಂಶೋಧನಾ ಪ್ರಬಂಧ ಅಥವಾ ಕಮ್ಮಟದಲ್ಲಿ ಮಂಡಿಸುವ ಪ್ರಬಂಧದ ಗುಣಮಟ್ಟದ ಆಧಾರದ ಮೇಲೆ ಕಮ್ಮಟಕ್ಕೆ ಶಿಬಿರಾರ್ಥಿಗಳನ್ನು ಆಯ್ಕೆ ಮಾಡಲಾಗುವುದು. 
  1. ಕಮ್ಮಟದಲ್ಲಿ ಮಂಡಿಸಲು ಆಯ್ಕೆಯಾದ ಪ್ರಬಂಧಗಳನ್ನು ಸಂಪಾದಿಸಿ ISBN ಸಂಖ್ಯೆಯೊಂದಿಗೆ ಪ್ರಕಟಿಸಲಾಗುವುದು. 
  1. ಪ್ರಕಟಿತ ಪ್ರಬಂಧಗಳಿಗೆ ಯಾವುದೇ ಗೌರವ ಸಂಭಾವನೆ ನೀಡಲಾಗುವುದಿಲ್ಲ. 
  1. ಅಗತ್ಯವಿದ್ದಲ್ಲಿ ಸಂಶೋಧನಾರ್ಥಿಗಳು ಪ್ರಕಟಿತ ಕೃತಿಗಳನ್ನು ಕೊಂಡುಕೊಳ್ಳಬಹುದು. ಉಚಿತ ಪ್ರತಿಗಳನ್ನು ನೀಡಲಾಗುವುದಿಲ್ಲ. 
  1. 20 ರಿಂದ 50 ವರ್ಷ ವಯೋಮಾನದವರು ಅರ್ಜಿ ಸಲ್ಲಿಸಬಹುದು. 
  1. ಕಮ್ಮಟವು 5 ದಿನಗಳ ಕಾಲ ನಡೆಯುವುದು. 
  1. ಕಮ್ಮಟ ನಡೆಯುವ ಸ್ಥಳ ಮತ್ತು ದಿನಾಂಕವನ್ನು ಮುಂದಿನ ದಿನಗಳಲ್ಲಿ ಅಕಾಡೆಮಿಯ ವೆಬ್‍ಸೈಟ್, ವಾಟ್ಸಾಪ್ ಗ್ರೂಪ್, ದಿನಪತ್ರಿಕೆಗಳ ಮೂಲಕ ತಿಳಿಸಲಾಗುವುದು.

   

ರಾಷ್ಟ್ರೀಯ ಕನ್ನಡ ಸಂಶೋಧನಾ ಕಮ್ಮಟ 

ಈ ಕೆಳಕಂಡ ಪರಿವಿಡಿಯ ಆಧಾರದ ಮೇಲೆ ಪ್ರಬಂಧಗಳನ್ನು ಕಳುಹಿಸುವುದು 

 ಪರಿವಿಡಿ 

  1. ಕನ್ನಡ ಸಾಹಿತ್ಯ ಚರಿತ್ರೆ ಕ್ರಿ.ಶ.450ರಿಂದ ಇಂದಿನವರೆಗೆ 
  1. ಕಾವ್ಯ ಮೀಮಾಂಸೆ 
  1. ಸಾಹಿತ್ಯ ವಿಮರ್ಶೆ 
  1. ಭಾಷಾ ವಿಜ್ಞಾನ, ನಿಘಂಟು ರಚನೆ 
  1. ಛಂದಸ್ಸು 
  1. ಗ್ರಂಥ ಸಂಪಾದನೆ ಮತ್ತು ಹಸ್ತಪ್ರತಿ ಶಾಸ್ತ್ರ 
  1. ಸಂಶೋಧನೆ 
  1. ಜಾನಪದ
  2.  ಸಾಂಸ್ಕೃತಿಕ ಅಧ್ಯಯನ ಮತ್ತು ಕನ್ನಡ ಸಂಸ್ಕೃತಿ

  3.   ಭಾರತೀಯ/ ಪಾಶ್ಚಾತ್ಯ ಭಾಷೆ ಮತ್ತು ಸಾಹಿತ್ಯಗಳತೌಲನಿಕ ಅಧ್ಯಯನ

  4.   ಶಾಸನ ಸಾಹಿತ್ಯ

  5.  ಶಾಸ್ತ್ರ ಸಾಹಿತ್ಯ

  6.  ದಾಖಲು ಸಾಹಿತ್ಯ

  7.  ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಶಾಸನ, ವಿಮರ್ಶೆ, ಮೀಮಾಂಸೆಗಳಿಗೆ ಸಂಬಂಧಿಸಿದ ವಿನೂತನ ಸಂಶೋಧನೆ. 

Last Updated: 01-02-2022 12:16 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : KARNATAKA SAHITHYA ACADEMY
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080